ಶ್ರಾವಣ ಮಾಸದ ಪುರಾಣ ಪ್ರಾರಂಭೋತ್ಸವ ಕಲಕೇರಿ- ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಶ್ರೀ ಗುರು ವೀರ ಘಂಟೈ ಮಡಿವಾಳೇಶ್ವರ ದೇವಸ್ಥಾನದಲ್ಲಿ ಸಂತ ಶ್ರೇಷ್ಠ ಜಗದ್ಗುರು ಶ್ರೀ ತಿಂಥಣಿ ಮೌನೇಶ್ವರ ಪುರಾಣವನ್ನು ಆಯೋಜನೆ ಮಾಡಲಾಗಿದ್ದು ,ಕಾರ್ಯಕಮ್ರದ ದಿವ್ಯ ಸಾನಿದ್ಯವನ್ನು ವಹಿಸಿರುವ ಪೂಜ್ಯ ಶ್ರಿ ಶಿವ ಬಸವ ಶಿವಾಚಾರ್ಯರು ಹಿರೇಮಠ,ಕೆರೂಟಗಿ ಆರ್ಶಿವಾದದ ನುಡಿಗಳನ್ನು ನೀಡುತ್ತಾ ತಿಂಥಣಿ ಮೌನೇಶ್ವರರು ಒಬ್ಬ ಶ್ರೇಷ್ಥ ಸಂತ, ಅಂತಹ ಮಹಾನುಭಾವರ ಪುರಾಣ ಕೇಳುವುದು ಕೂಡಾ ಒಂದು ಪುಣ್ಯದ ಕೆಲಸ , ಅದರ ಸದುಪಯೋಗವನ್ನು ಎಲ್ಲ ಮಹಿಳೆಯರನ್ನೊಳಗೊಂಡು ಪುರುಷರು ,ಮಕ್ಕಳು ಪಾಲ್ಗೊಳಿರೆಂದು ಹೇಳಿದರು. ಸಾನಿಧ್ಯ ವಹಿಸಿದವರು ಪುಜ್ಯಶ್ರೀ ಷ.ಬ್ರ.ಮಡಿವಾಳೇಶ್ವರ ಶಿವಾಚಾರ್ಯರು ದೇವರ ಸೇವೆಯನ್ನು ನಿಸ್ವಾರ್ಥದಿಂಧ ಮಾಡಿದಾಗ ಮಾತ್ರ ಆದೇವರು ಎಲ್ಲರಿಗೂ ಒಳ್ಳೆಯ ಆನುಗ್ರಹ ಮಾಡಿ ,ಸರಿಯಾದ ಮಳೆ ,ಬೆಳೆ ಆಗುತ್ತದೆ ಎಂದು ಆರ್ಶಿವದಿಸಿದರು. ಕಾರ್ಯಕ್ರಮದಲ್ಲಿ ಸಿದ್ದು ಬುಳ್ಳಾ,ರಾಜು ಕಂಠಿ,ಮುದಕಣ್ಣ ದೋರಿಗೋಳ,ಮುದಕಣ್ಣ ದೇಸಾಯಿ,ಮಲ್ಲಿನಾಥ ಭೈರಿ,ದೇವಿಂದ್ರ ಜಂಬಗಿ,ಅರವಿಂದ ಬೇನಾಳ,ಕುಮಾರ ದೇಸಾಯಿ,ಹಣಮಂತ ವಡ್ಡರ,ನ್ಯಾಮು ವಡ್ಡರ,ಮಾಂತೇಶ ಮೂಲಿಮನಿ,ಸಂತೋಷ ಕಾಳಶೇಟ್ಟಿ,ಸಿವಾನಂದ ವಂದಾಲ,ಶಿವಾನಂದ ವಂದಾಳ,ಬಾಬುಗೌಡ ಬಿರಾದಾರ,ಬಿ.ಡಿ,ಜಂಗಾಣಿ,.ಶಾಮು ಪತ್ತಾರ.ಶ್ರೀಶೈಲ ಅಡಕಿ,ರಾಮು ಕಂಬಾರ...