ಮನೆಯೆ ಮೊದಲ ಪಾಠ ಶಾಲೆ, ಜನನಿ ತಾನೆ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ಧನ್ಯರು’ ಎಂಬ ಕವಿವಾಣಿ ಪ್ರಸಿದ್ಧವಾಗಿದೆ. ಭಾರತೀಯ ಸಂಸ್ಕೃತಿ ‘ಮಾತೃದೇವೋ ಭವ’ ಎಂದು ತಾಯಿಗೆ ದೈವತ್ವದ ಪಟ್ಟ ನೀಡಿ ಗೌರವಿಸಿದೆ. ‘ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಹುಟ್ಟಲಾರಳು’ ಎಂದು ಶಂಕರಾಚಾರ್ಯರು ಹೇಳಿದ್ದಾರೆ. ಅಷ್ಟೇಕೆ, ನೆಲವನ್ನೂ ನಾವು ಮಾತೃಸ್ವರೂಪದಲ್ಲಿ ಭಾವಿಸುತ್ತೇವೆ. ಭಾರತಮಾತೆ, ಕರ್ನಾಟಕ ಮಾತೆ ಎಂದು ಹೇಳುತ್ತೇವೆ. ‘ವಂದೇ ಮಾತರಂ’ ಹಾಡುತ್ತೇವೆ. ರಾಷ್ಟ್ರಕವಿ ಕುವೆಂಪು ಅವರು ‘ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಎಂದು ನಾಡಗೀತೆಯಲ್ಲಿ ಉದ್ಗರಿಸಿದ್ದಾರೆ. ಕನ್ನಡ ಮಾತೆ ಭಾರತಮಾತೆಯ ಪುತ್ರಿ ಅಂದರೆ ಭಾರತೀಯ ಸಂಸ್ಕೃತಿಯ ಒಡಲಲ್ಲಿ ಕನ್ನಡ ಸಂಸ್ಕೃತಿ ಹೂವಾಗಿ ಅರಳಿದೆ ಎನ್ನಬಹುದು,

ಅಂತಹ ಮಹಾನ ತಾಯಿಯ 5 ನೇ ಪುಣ್ಯ ಸ್ಮರಣೆಯ ದಿನವಾದ ಇಂದು ಕಲಕೇರಿಯಲ್ಲಿ ಸುಮಾರು 1000 
ಸಸಿಗಳನ್ನು ನೇಡುವ ಮೂಲಕ ತನ್ನ ತಾಯಿಯ ಋಣವನ್ನು ತೀರಿಸಲು ಸಣ್ಣ ಪ್ರಯತ್ನದತ್ತ 
ನನ್ನ ಸಹೋದರ ಸ್ವರೂಪಿ ಸ್ನೇಹಿತ ಶ್ರೀ ಸುಧಾಕರ ಅಡಕಿ ಸಾ|| ಕಲಕೇರಿ.

ದೃಶ್ಯ :- ಶ್ರೀ ಬಸವೇಶ್ವರ ಪದವಿ ಪುರ್ವ ಮಹಾವಿದ್ಯಾಲಯ ಕಲಕೇರಿ
ದೆ.


















ಕಾಮೆಂಟ್‌ಗಳು