ಒಂದು ಘಂಟೆ ಮಳೆ
ಸಂಗಮೇಶ ಸಗರ (ಸಂದೇಶ) ******************** ಒಂದು ಘಂಟೆಯ ಮಳೆ (ಮಳೆ ಸಂತೆಯ ಸೋದರ ಮಾವ ) *ವಾರದ ಗಂಜೀಗೆ ಬಿತ್ತು ಚಪ್ಪಡಿ ಕಲ್ಲು *6 ದಿನ ಕಾಯ್ದು ವಾರದ ಸಂತೆಗೆ ತಯಾರಿ *ಸಂತೆ ಚನ್ನಾಗಿ ಆದರೆ ಕೊಡುವುವರ ದುಡ್ಡು ಸರಿಯಾಗಿ ಕೊಡಬಹುದು *ಮಳೆಯಿಂದ ಎಲ್ಲಾ ತರಕಾರಿ ಹಾನಿ *ಮಳೆಯಿಂದ ಎಲ್ಲಾ ವ್ಯಾಪಾರಸ್ಥರ ಜೀವನ ಅಸ್ಥವಸ್ತ ********************************************** ಅದೊಂದು ಮಧ್ಯಮ ವರ್ಗದ ಕುಟುಂಬ ರೇಷ್ಮಾ ಅನ್ನುವ ವಿವಾಹಿತ ಮಹಿಳೆ ಅಷ್ಟೋಂದು ಹೇಳುವಂತ ಸ್ಥಿತಿವಂತರೆನ್ನಲ್ಲ, ಅದರೂ ಶಾಯೀನ ಮತ್ತು ಸಮೀರ ಎಂಬ 2 ಮಕ್ಕಳ ತುಂಬು ಕುಟುಂಬ, ಆದರೆ ಗಂಡ ಇಮಾಮಸಾಬ್ ಮಾತ್ರ ಸೇರೆಯ ಸರದಾರ, ನಿತ್ಯವೂ ಅದರಿಂದಲೇ ಜಳಕ, ಮನೆಯಲ್ಲಿ ರೇಷ್ಮಾ ಮಾತ್ರ ಮನೆಗೆಲಸ ಮುಗಿಸಿ, ಮಕ್ಕಳಿಗೆ ತಿಂಡಿ ಮಾಡಿ ಅವರನ್ನು ಶಾಲೆಗೆ ತಯಾರಿ ಮಾಡಿ ಅವರನ್ನು ಕಳುಹಿಸುವ ಜವಾಬ್ದಾರಿ, ಅದರಲ್ಲು ಕುಡುಕ ಗಂಡನ ಜೋತೆ ಯಾವುದೇ ಸಂಸಾರಿಕ ಹಾಗೂ ಸಾಮಾಜಿಕ ಸಂತೋಷವನ್ನು ಕಾಣದೇ ಎಲ್ಲವನ್ನು ಸಹಿಸುವ ಕರುಣಾಮಯಿ. ಎಲ್ಲ ಮನೆಯಲ್ಲಿ ಗಂಡಸರು ದುಡಿದು ಸಂಸಾರ ನಡೆಸಿದರೆ, ಇಲ್ಲಿ ಎಲ್ಲಾ ಉಲ್ಟಾ, ಯಾವುದೇ ಜವಾಬ್ದಾರಿ ಇಲ್ಲದ ಗಂಡ, ದಿನನಿತ್...