ಒಂದು ಘಂಟೆ ಮಳೆ
ಸಂಗಮೇಶ ಸಗರ (ಸಂದೇಶ)
********************
ಒಂದು ಘಂಟೆಯ ಮಳೆ
(ಮಳೆ ಸಂತೆಯ ಸೋದರ ಮಾವ )
*ವಾರದ ಗಂಜೀಗೆ ಬಿತ್ತು ಚಪ್ಪಡಿ ಕಲ್ಲು *6 ದಿನ ಕಾಯ್ದು ವಾರದ ಸಂತೆಗೆ ತಯಾರಿ
*ಸಂತೆ ಚನ್ನಾಗಿ ಆದರೆ ಕೊಡುವುವರ ದುಡ್ಡು ಸರಿಯಾಗಿ ಕೊಡಬಹುದು
*ಮಳೆಯಿಂದ ಎಲ್ಲಾ ತರಕಾರಿ ಹಾನಿ *ಮಳೆಯಿಂದ ಎಲ್ಲಾ ವ್ಯಾಪಾರಸ್ಥರ ಜೀವನ ಅಸ್ಥವಸ್ತ
**********************************************
ಅದೊಂದು ಮಧ್ಯಮ ವರ್ಗದ ಕುಟುಂಬ ರೇಷ್ಮಾ ಅನ್ನುವ ವಿವಾಹಿತ ಮಹಿಳೆ ಅಷ್ಟೋಂದು ಹೇಳುವಂತ ಸ್ಥಿತಿವಂತರೆನ್ನಲ್ಲ, ಅದರೂ ಶಾಯೀನ ಮತ್ತು ಸಮೀರ ಎಂಬ 2 ಮಕ್ಕಳ ತುಂಬು ಕುಟುಂಬ, ಆದರೆ ಗಂಡ ಇಮಾಮಸಾಬ್ ಮಾತ್ರ ಸೇರೆಯ ಸರದಾರ, ನಿತ್ಯವೂ ಅದರಿಂದಲೇ ಜಳಕ, ಮನೆಯಲ್ಲಿ ರೇಷ್ಮಾ ಮಾತ್ರ ಮನೆಗೆಲಸ ಮುಗಿಸಿ, ಮಕ್ಕಳಿಗೆ ತಿಂಡಿ ಮಾಡಿ ಅವರನ್ನು ಶಾಲೆಗೆ ತಯಾರಿ ಮಾಡಿ ಅವರನ್ನು ಕಳುಹಿಸುವ ಜವಾಬ್ದಾರಿ, ಅದರಲ್ಲು ಕುಡುಕ ಗಂಡನ ಜೋತೆ ಯಾವುದೇ ಸಂಸಾರಿಕ ಹಾಗೂ ಸಾಮಾಜಿಕ ಸಂತೋಷವನ್ನು ಕಾಣದೇ ಎಲ್ಲವನ್ನು ಸಹಿಸುವ ಕರುಣಾಮಯಿ.
ಎಲ್ಲ ಮನೆಯಲ್ಲಿ ಗಂಡಸರು ದುಡಿದು ಸಂಸಾರ ನಡೆಸಿದರೆ, ಇಲ್ಲಿ ಎಲ್ಲಾ ಉಲ್ಟಾ, ಯಾವುದೇ ಜವಾಬ್ದಾರಿ ಇಲ್ಲದ ಗಂಡ, ದಿನನಿತ್ಯದ ಮನೆಯ ಕರ್ಚಿನ ಜಮಾವಣೆ ಒಂದು ಕಡೆಯಾದರೆ ಇಂದಿನ ಆಧುನಿಕ ಸ್ಪರ್ಧಾತ್ಮಕ ಶಾಲೆಗಳಲ್ಲಿ ಮಕ್ಕಳನ್ನು ಓದಿಸಿ ಮಕ್ಕಳನ್ನು ಉನ್ನತ ಹುದ್ದೆಯಲ್ಲಿ ನೋಡುವ ಹಂಬಲದೊಂದಿಗೆ ಮಾಡಿದ ಸಾಲದ ಹೋಣೆ.
ನಿತ್ಯವೂ ಸಾಲಗಾರರ ಕೀರಿ ಕೀರಿ, ಸಮಾಜಕ್ಕೆ ಅಂಜಿ ನಡೆಯುವ ಪರಿಸ್ಥಿತಿ , ಇಂತಹ ಸನ್ನಿವೇಶದಲ್ಲಿ ಯಾವುದಕ್ಕೂ ಅಂಜದೇ ಯಾರಿಗೂ ಕೈಚಾಚದೇ ಸ್ವಂತ ಬಲದಿಂದ ಎನಾದರೂ ಮಾಡಬೇಕೆಂಬ ದೃಡವಾದ ಛಲ. ಅವಳನ್ನು ಈ ಕೆಟ್ಟ ಹಿಯಾಳಿಸುವ ಸಮಾಜಕ್ಕೆ ಅಂಜದೇ ಏನಾದರೂ ಸಾಧಿಸಬೇಕೆಂದು ಹೋರಟಳು,
ಅವಳಿಗೆ ತಿಳಿದ ಕುಟುಂಬಸ್ಥರಲ್ಲಿ, ಸ್ನೇಹಿತರಲ್ಲಿ, ಅಕ್ಕಪಕ್ಕದವರಲ್ಲಿ, ನೆಂಟಸ್ಥರಲ್ಲಿ ವಿಚಾರಿಸಿ ಪರಿಹಾರ ತಿಳಿಸುವಂತೆ ಅಂಗಲಾಚಿ ಬೇಡಿಕೊಂಡಳು. ಆದರೆ ಎಲ್ಲರೂ ಅವಳನ್ನು ಕ್ಷುಲಕ ರೀತಿಯಲ್ಲಿ ನೋಡಿ ಹಣ ಇರದವರನ್ನು ಈ ಸಮಾಜ ಅತ್ಯಂತ ಕೀಳಾಗಿ ನೋಡುವದನ್ನು ಸೂಕ್ಷ್ಮವಾಗಿ ಗಮನಿಸಿದ ಅವಳು ಇನ್ನು ಮುಂದೆ ಯಾರ ಹತ್ತಿರವೂ ತನ್ನ ಕುಟುಂಬದ ಸಮಸ್ಯೆ ಹೇಳಬಾರದೆಂದು ನಿರ್ಧಾರಕ್ಕೆ ಬಂದಳು. ಈ ಮೊದಲೇ ಹಲವಾರು ಭಾರಿ ಹೊಸ ಪ್ರಯತ್ನ ಮಾಡಿ ಕೈಸುಟ್ಟು ಕೊಂಡಿರುವ ಅವಳು ಗಟ್ಟಿ ದೈರ್ಯ ಮಾಡಿ ಆ ಭಗವಂತನ ಹೆಸರಲ್ಲಿ ಮತ್ತೊಂದು ಪ್ರಯತ್ನ ಮಾಡಿದಳು.
ಮಹಿಳೆಯರಿಗೆ ದಿನನಿತ್ಯಕ್ಕೆ ಬೇಕಾದ ವಸ್ತುಗಳನ್ನು ಮಾರಾಟಮಾಡಬೇಕೆಂಧು ಚಿಂತನೆ ನಡೆಸಿದಳು, ಆದರೆ ಏನು ಮಾಡಬೇಕೆಂದು ಗೊಂದಲದಲ್ಲಿ ಇರುವಾಗ ಮನೆ ಮುಂದೆ ಯಾರೊ ಒಬ್ಬಳು ಬಂದು ಅಕ್ಕಾವರೆ ಸ್ವಲ್ಪ ಕೋತಂಬರಿ ಇದ್ದರೆ ಕೊಡಿ ಎಂದು ಕೇಳಿದಳು, ಆಗಲೇ ರೇಷ್ಮಾಗೇ ತಕ್ಷಣ ಒಂದು ಉಪಾಯ ಹೊಳೆಯಿತು. ನಾನು ಮಹಿಳೆಯಾಗಿ ತರಕಾರಿ ಮಾಡಬಹುದಲ್ವಾ ಎಂದು ಆತ್ಮೀಯÀರಲ್ಲಿ ವಿಚಾರಿಸಿದಳು. ಸರಿಯಾದ ಮಾರ್ಗ ಎಂದು ಅರಿತ ಅವಳು ಕಡಿಮೆ ಬಂಡವಾಳದಲ್ಲಿ ಈ ವ್ಯಾಪಾರ ಮಾಡಬಹುದೆಂದು ಅರಿತು ಬಗ್ಗೆ ಮಾಹಿತಿ ಕಲೆ ಹಾಕಲು ಪ್ರಾರಂಭಿಸಿದಳು.
ಎಲ್ಲಿ ತರಕಾರಿ ತರಬೇಕು, ಯಾರ ಹತ್ತೀರ ಕಡಿಮೆ ಬೆಲೆಯಲ್ಲಿ ದೊರಕುವುದು, ಯಾವ ವೇಳೆಯಲ್ಲಿ ಯಾವ ವಸ್ತುವಿಗೆ ಬೆಲೆ ಜಾಸ್ತಿ, ಯಾವಾಗ ಯಾವುದನ್ನು ಶೇಖರಿಸಿಡಬೇಕು, ತಂದ ತರಕಾರಿ ಯಾವ ರೀತಿ ಸಂರಕ್ಷಿಸಬೇಕು, ಯಾವ ಬೆಲೆಗೆ ಮಾರಿದರೆ ಲಾಭವಾಗುವುದು, ಗಿರಾಖಿಗಳನ್ನು ಹೇಗೆ ಮತ್ತೆ ಮತ್ತೆ ಮರಳಿ ಬರುವ ಹಾಗೆ ಮಾಡಬೇಕೆಂಬ ಮಾಹಿತಿಯನ್ನು ಕಲೆ ಹಾಕಿದಳು.
ಕೊನೆಗೂ ಆ ದಿನ ಬಂದೆ ಬಿಡ್ತು , ಕಡಿಮೆ ಬಂಡವಾಳದೊಂದಿಗೆ ತರಕಾರಿ ಮಾರುವ ವೃತ್ತಿ ಪ್ರಾರಂಭಿಸಿಯೇ ಬಿಟ್ಟಳು, ದಿನವೂ ವ್ಯಾಪಾರ ಅಷ್ಟಕ್ಕೆ ಅಷ್ಟೇ ಆಗಿತ್ತಿತ್ತು. ವಾರಕ್ಕೆ ಒಂದು ದಿನ ಸಂತೆ ಮಾರುಕಟ್ಟೆ ನಡೆಯುತ್ತಿತ್ತು, ಆಗ ಮಾತ್ರ ತಾನೂ ತಂದ ಎಲ್ಲಾ ತರಕಾರಿಯೂ ಖಾಲಿಯಾಗುತ್ತಿತ್ತು. ಇದರಿಂದ ಒಂದು ವಾರದಲ್ಲಿ ಆಗುವ ಲಾಭವು ಇದು ಒಂದೇ ದಿನದಲ್ಲಿ ಆಗುತ್ತಿತ್ತು. ಇದರಿಂದ ಸ್ವಲ್ಪ ಸುಧಾರಿಸಿಕೊಳ್ಳುವ ವಾತಾವರಣ ನಿರ್ಮಾಣವಾಗುತ್ತಿತ್ತು .
ಹೀಗೆ ಒಂದು ವಾರದ ದಿನ ಬೆಳಿಗ್ಗೆ ಎಲ್ಲವೂ ಸರಿಯಾಗಿ ನಡೆಯುವದೆಂಬ ಮಹದಾಸೆಯಿಂದ ಹೆಚ್ಚಿನ ಪ್ರಮಾಣದ ತರಕಾರಿಗಳನ್ನು ಕರಿದಿಸಿ ತಂದಿದ್ದಳು ರೇಷ್ಮಾ, ಸುಮಾರು 2 ಘಂಟೆಯ ಕಾಲ ವ್ಯಾಫಾರ ಚನ್ನಾಗಿಯೇ ನಡೆದಿತ್ತು, ನಂತರ ಆಕಾಶದಲ್ಲಿ ಒಮ್ಮಿದೊಮ್ಮಲೇ ಕತ್ತಲೇಯ ಕಾರ್ಮೋಡ ಈಡೀ ಭೂಮಂಡಳವನ್ನೆ ನುಂಗುವ ರೀತಿ ಒತ್ತಿಕೊಂಡು ಬಂದಿತು. ಇದರಿಂದ ಮಾರುಕಟ್ಟೆಯಲ್ಲಿರುವ ಎಲ್ಲ ವ್ಯಾಪಾರಿಗಳೂ, ಜನಸಾಮಾನ್ಯರು ಅಂಜೀ ಮಳೆ ಬಂದರೆ ನಮ್ಮ ಪರಿಸ್ಥಿತಿ ಏನು? ನಾವು ತಂದಿರುವ ತರಕಾರಿಗಳು, ಹಣ್ಣು ಹಂಪಲುಗಳು, ಕಾಳುಕಡಿಗಳು, ದಿನಸಿ ಸಾಮನುಗಳು ಹಾಗೂ ಇನ್ನೂ ಅನೇಕ ಸಾಮಾಗ್ರಿಗಳು ಮಳೆಯಲ್ಲಿ ತೋಯ್ದು ಒದ್ದೆಯಾದರೆ ಹೇಗೆಂದು ಎದೆ ಒಡೆದು ನೀರಾದರೂ, ಇದಕ್ಕೆ ರೇಷ್ಮಾ ಮಾತ್ರ ಹೋರತೆನಲ್ಲ ಅವಳು ವ್ಯಾಪಾರಕ್ಕೆ ಹೊಸಬಳು, ಯಾವುದೇ ಮುಂಜಾಗೃತ ತಯಾರಿ ಇರದೇ ಬಂದಿದ್ದಳು, ಒಮ್ಮಿಂದೊಮ್ಮೆಗೆ ಮಳೆ ಪ್ರಾರಂಭವಾಯಿತು, ಆಗ ಎಲ್ಲಾ ವ್ಯಾಪಾರಿಗಳು ತಮ್ಮ ಸಾಮಗ್ರಿಗಳಿಗೆ ತಾವು ತಂದಿರುವ ಪ್ಲಾಸ್ಟೀಕ ಹಾಳೆಯನ್ನು ಹಾಕಿದರು, ಮಳೆ ನೀರು ತಾಗದ ಹಾಗೆ ಮೆರೆಯಲ್ಲಿ ಒಯ್ದರು, ಇದರ ಪರಿವೆಯೆ ಇಲ್ಲದೇ ಸುಮ್ಮನೆ ಮಳೆಯಲ್ಲಿ ನೆನೆದು ಒದ್ದೆಯಾಗುತ್ತಾ ನಿಂತಿದ್ದನ್ನು ಕಂಡು ಸಮೀಪದ ಶೆಟ್ಟರ ಅಂಗಡಿಯ ಸೌಕಾರರು ಯಾಕಮ್ಮ ತರಕಾರಿ ಮುಚ್ಚಲು ಏನು ತಂದಿಲ್ವಾ ? ಎಂದು ಅವಳನ್ನು ಕೇಳುತ್ತಾ ಅಂಗಡಿಯ ಗುಮಾಸ್ತನಿಗೆ ಒಳಗಿರುವ ಪ್ಲಾಸ್ಟಿಕ ಹಾಳೆಯನ್ನು ಅವಳಿಗೆ ಕೊಡು ಪಾಪ ಎಲ್ಲಾ ಮಳೆಯಲ್ಲಿ ತೊಯ್ದು ಹಾನಿಯಾಗುವುವು ಎಂರದು, ಇದನ್ನು ಕೇಳಿದ ರೇಷ್ಮಾ ಆ ಭಗವಂತ ಯವುದಾದರೂ ರೂಪದಲ್ಲಿ ಬಂದು ಕಾಪಾಡುವನ್ನು ಎಂದು ಮನದಲ್ಲಿ ಸ್ಮರಿಸಿ ತರಕಾರಿಗೆ ಪ್ಲಾಸ್ಟಿಕ್ ಹಾಳೆ ಮುಚ್ಚಿ ಅಂಗಡಿ ಬಳಿ ನಿಂತಳು ,
ಒಂದು ಘಂಟೆಯ ವರೆಗೂ ಬೀಡದೇ ಹೊಡೆದ ಮಳೆಯಿಂದ ಮಾರುಕಟ್ಟೆ ಸಂಪೂರ್ಣ ಖಾಲಿ, ಖಾಲಿಯಾಗಿ ಕಾಣುತ್ತಿತ್ತು, ಮತ್ತೇ ಇವಳಲ್ಲಿ ಆತಂಕ ಶುರುವಾಯಿತು. ತಾನು ತಂದಿರುವ ತರಕಾರಿ ಇಂದು ಮಾರದಿದ್ದರೆ ನಷ್ಟವಾಗುವುದು, ಇದರಿಂದ ಸಾಲಗಾರರಿಗೆ ಕೋಡಬೇಕಾದ ಸಾಲ ಹೇಗೆ ಕೋಡಬೇಕು, ಮುಂದಿನ ವಾರದವರೆಗೂ ಊಟಕ್ಕೆ ಏನು ಗತಿ, ಮಕ್ಕಳ ಶಾಲೆ ಖರ್ಚು ಹೇಗೆ ನೂರಾಒಂದು ಚಿಂತೆಗಳು ಮನದಲ್ಲಿ ಬಂದು ಹೋದವು.
ಮಳೆ ನಿಂತು ಅರ್ಧ ಘಂಟೆಯಾದರೂ ಅವಳು ಇನ್ನು ಸುಧಾರಿಸಿಕೊಂಡಿದಿಲ್ಲ ಮುಖ ವಿಸ್ಮಯಳಾಗಿ ಬೀದಿರು ಗೋಂಬೆ ನಿಂತಿರುವ ಹಾಗೆ ನಿಂತಿದ್ದಳು, ಗುಮಾಸ್ತ ಕೂಗಿ ಯಾಕಮ್ಮ ಮಳೆ ನಿಂತರೂ ಇನ್ನು ಹಾಗೆ ನಿಂತಿರುವಿಯಲ್ಲ ಎಂದಾಗ ಎಚ್ಚೆತ್ತುಕೊಂಡು, ಸುಧಾರಿಸಿಕೊಂಡು ತನ್ನ ತರಕಾರಿ ಹತ್ತಿರ ಹೋದಳು, ಕಣ್ಣಂಚಿನಲ್ಲಿ ನೀರಿನ ಹನಿಗಳನ್ನು ತುಂಬಿಕೊಂಡು ಇನ್ನೆನು ಅಳಬೇಕು ಅನ್ನುವಷ್ಟರಲ್ಲಿ ಇಂದು ಮಧುವೆಯ ತರಕಾರಿಯ ಗಿರಾಕಿ ಬಂದು ಏನಮ್ಮ , ಮದುವೆಗೆ ತರಕಾರಿ ಬೇಕಿದೆ ಬೇಗ ಬೇಗ ಕೊಡು ಎಂದರು .
ನಿಧಾನವಾಗಿ ಸಾವರಿಸಿಕೊಂಡ ರೇಷ್ಮಾ ಎಲ್ಲಾ ತರಕಾರಿಯನ್ನು ಅವರಿಗೆ ಕೊಟ್ಟು ಕೈತುಂಬ ಹಣವನ್ನು ಪಡೆದು ಆ ಭಗವಂತನ್ನನ್ನು ಮನದಲ್ಲಿ ಒಂದಿಸುತ್ತಾ, ನಂಬಿದವರನ್ನು ಎಂಧು ಕೈಬೀಡುವುದಿಲ್ಲ ಎನ್ನುತ್ತಾ ಮನೆಯನ್ನು ಸೇರಿ ಮಕ್ಕಳೊಂದಿಗೆ ನಡೆದ ಘಟನೆ ಹೇಳಿ ಆನಂಧಿಸಿದಳು.
ಸಂಗಮೇಶ ಸಗರ (ಕಲಕೇರಿ)
ಹವ್ಯಾಸಿ ಬರಹಗಾರ
-(ಅಂತರಾಳ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ